Shree Kailar Rajgopal Bhat
Vaasthugida Sannidhi
Uppinangadi
Puttur T.Q
D.K Dist 574241
Karnataka
9448041693
9986221860
ನಾನು ತಮ್ಮಲ್ಲಿಗೆ ಹೋದ ತಿಂಗಳು ಬಂದಿದ್ದಾಗ ತಾವು ಪೂಜಿಸಿ ಕೊಟ್ಟ ವಾಸ್ತುವಿನ ಗಿಡವನ್ನು ನಮ್ಮ ಮನೆಯಲ್ಲಿ ನೀವು ಹೇಳಿದಂಥೆ ಸ್ಥಾಪನೆ ಮಾಡಿರುತ್ತೇನೆ. ಯಾವುದೇ ರೀತಿ ಚ್ಯುತಿ ಬರದಂತೆ ೫ ವಾರಗಳಿಂದ ಪೂಜಿಸುತ್ತಿದ್ದೇನೆ.
ನಾನು ನಿಮ್ಮಲ್ಲಿ ಬಂದಾಗ ತಿಳಿಸಿದಂತೆ ನನಗೆ ಸಾಲದ ಬಾದೆಯಿಂದ ದಿವಸಕ್ಕೆ ೩ ಅಥವಾ ೪ ಗಂಟೆ ಮಾತ್ರ ನಿದ್ದೆ ಮಾಡುತ್ತಿದ್ದೆನು. ಈಗ ೫ ಗಂಟೆಯವರೆಗೆ ನಿದ್ರಿಸುತ್ತೇನೆ. ನನ್ನ ಸಾಲವನ್ನು ತೀರಿಸಲು ನನಗೆ ಬೇರೆ ದಾರಿಗಳು ಇರಲಿಲ್ಲ. ನನ್ನ ಒಂದು ನಿವೇಶನಕ್ಕೆ ಸುಮಾರು ವರ್ಷಗಳಿಂದ ಕೊಳ್ಳುವವರೇ ಬರುತ್ತಿರಲಿಲ್ಲ. ವಾಸ್ತು ಸ್ಥಾಪನೆ ಮಾಡಿದ ೪ ವಾರದಲ್ಲಿ ಆ ಸೈಟನ್ನು ಕೊಂಡುಕೊಳ್ಳಲು ಒಬ್ಬರು ಬಂದಿದ್ದು, ಮುಂಗಡ ಹಣವನ್ನು ನೀಡಿರುತ್ತಾರೆ. ಅಲ್ಲದೆ ನಾನು ಈ ಮೊದಲು ಸೋಲಾರ ವ್ಯಾಪಾರ ಮಾಡುತ್ತಿದ್ದು. ವ್ಯಾಪಾರವೇ ಆಗದೆ ಅಂಗಡಿಯನ್ನು ಮುಚ್ಚಿ ಬಿಟ್ಟಿರುತ್ತೇನೆ. ಈಗ ಈ ತಿಂಗಳಿನಲ್ಲಿ ಒಂದು ಸೋಲಾರ್ ವ್ಯಾಪಾರ ಆಗಿದ್ದು ೪ ಸೋಲಾರ್‌ಗೆ ಆರ್ಡರ್ ಬಂದಿರುತ್ತದೆ. ನಂತರ ನಾನು ಒಂದು ಗಿಡಮೂಲಿಕೆ ಔಷಧದ ಏಜೆನ್ಸಿ ಇರುತ್ತದೆ. ಅದು ಕೂಡಾ ನಿಂತು ಹೋಗಿರುತ್ತದೆ. ಅದರ ಬಗ್ಗೆ ಅವರುಗಳೇ ಬಂದು ಖಂಡಿತಾ ಬನ್ನಿ ಎಂದು ಹೇಳಿಹೋಗಿರುತ್ತಾರೆ.
ಆದುದರಿಂದ ನಾನು ನಿಮ್ಮಲ್ಲಿ ಮತ್ತು ಶ್ರೀ ಸೌತಡ್ಕ ಮಹಾಗಣಪತಿ ದೇವರಿಗೆ ಚಿರಋಣಿ. ಇನ್ನು ಮುಂದೆನೂ ನನಗೆ, ನನ್ನ ಮಕ್ಕಳಿಗೆ ವಿದ್ಯಾಭ್ಯಾಸ, ಕೆಲಸ, ವ್ಯಾಪಾರ, ಸಾಲದ ಚಿಂತೆ ದೂರವಾಗಿ ಒಳ್ಳೆಯದನ್ನು ನನ್ನ ಜೀವನದಲ್ಲಿ ಕಾಣುವಂರಾಗಲಿ ಎಂದು ಬೇಡುತ್ತೇನೆ. ಪಿ.ಕೆ. ಕಾವೇರಿಯಪ್ಪ, ಮೈಸೂರು
ನಾನು ಈ ಹಿಂದೆ ಜುಲೈ ತಿಂಗಳಿನಲ್ಲಿ ಕಸ್ತೂರಿಯಿಂದ ಪ್ರೇರಿತನಾಗಿ ಈ ವಾಸ್ತುಗಿಡವನ್ನು ತೆಗೆದುಕೊಂಡು ಹೋಗಲು ತನು ಮನ-ಧನಗಳನ್ನು ಅಪೇಕ್ಷಿಸಿ ಶೃದ್ದೆಯಿಂದ ಬಂದಿದ್ದೆ. ಅದೇ ಶೃದ್ದೆಯಿಂದ ಪೂಜ್ಯರಲ್ಲಿ ಅರಿಕೆ ಮಾಡಿಕೊಂಡು ಕ್ರಮವರಿತು ದಿನನಿತ್ಯ ಪಠನೆ ಮಾಡುತ್ತಾ ಬಂದೆ. ನನ್ನ ಆರ್ಥಿಕ ಸ್ಥಿತಿ ಸರಿ ಇರಲಿಲ್ಲ. ಈಗ ನಾನು ಒಂದು ಮನೆ ಖರೀದಿ ಮಾಡಿದೆ. ಕೋರ್ಟ್-ಕಛೇರಿಗಳ ಕೆಲಸವಾಗಿವೆ. ಆದುದರಿಂದ ನಮ್ಮ ಬಾವ ಮತ್ತು ಅಣ್ಣನವರಿಗೆ ಈ ವಿಷಯ ತಿಳಿಸಿದೆ. ಅವರು ಸಹ ಆಸಕ್ತರಾಗಿ ಗಿಡಗಳನ್ನು ದಿನಾಂಕ ೨೦-೦೮-೨೦೦೮ರಂದು ಪುನಃ ಎರಡು ಗಿಡಗಳನ್ನು ತೆಗೆದುಕೊಂಡು ಹೋಗಲು ಬಂದಿರುತ್ತೇನೆ. ಒಟ್ಟಾರೆ ನನ್ನ ಅಭಿಪ್ರಾಯ. ನಂಬಿ ಬಂದವರಿಗೆ ವಿಘ್ಞೇಶ ಸಕಲ ಕಾರ್ಯಕ್ಕೆ ಸಿದ್ದಿಸುವ ವರ ಈ ಪೂಜ್ಯರಿಂದ ನಮಗೆ ಫಲವಾಗಿದೆ ಎಂದು ಹೇಳಲು ಹರ್ಷಿಸುತ್ತೇನೆ. ಕೆ.ಎನ್.ಬಸವರಾಜಯ್ಯ, ದಾವಣಗೆರೆ ೯೯೮೬೫೨೯೫೦೧
ನಾನು ನಿಮ್ಮ ಸನ್ನಿಧಿಗೆ ಬಂದು ಹಿಂದೆ ಒಂದು ವಾಸ್ತುಗಿಡವನ್ನು ಪಡೆದುಕೊಂಡು ಹೋಗಿದ್ದು ನಮ್ಮ ಸನ್ನಿಧಿಯಲ್ಲಿ ಪೂಜೆಯನ್ನು ಮಾಡುತ್ತಿದ್ದೆವು. ಆದ್ದರಿಂದ ವ್ಯಾಪಾರ ಅಭಿವೃದ್ದಿಯಾಗಿ ತದನಂತರ ರೋಡ್ ವಿಸ್ತಾರ ಮಾಡಿ ಅಂಗಡಿಯ ಮಾಲೀಕರು ಅಂಗಡಿ ಮಾಡುವುದಿಲ್ಲವೆಂದು ಹೇಳಿದ್ದರು. ತಮ್ಮ ಸನ್ನಿಧಿಗೆ ಫೋನ್ ಮಾಡಿ ಅರಿಕೆಯನ್ನು ಮಾಡಿಕೊಂಡೆನು. ಅಂಗಡಿಯ ಮಾಲೀಕರು ಅಂಗಡಿ ದೊಡ್ಡದು ಮಾಡುವುದಕ್ಕೆ ಒಪ್ಪಿಗೆ ಮಾಡಿಸಿಕೊಟ್ಟಿರುತ್ತಾರೆ. ಅಂಗಡಿಯನ್ನು ದೊಡ್ಡದಾಗಿ ಮಾಡಿರುವುದು ದೇವರ ದಯೆಯಿಂದ ಒಳ್ಳೆಯದು ಆಗುತ್ತಿದೆ. ಮಹಾಗಣಪತಿಯು ನಮಗೆ ಒಳ್ಳೆಯದನ್ನು ಮಾಡಬೇಕು ಅಂತಹ ಅನುಗ್ರಹವನ್ನು ಮಾಡಿಕೊಡಬೇಕಾಗಿ ತಮ್ಮ ಸನ್ನಿಧಿಯಲ್ಲಿ ಅರಿಕೆ ಮಾಡಿಕೊಳ್ಳುತ್ತೇನೆ. ಕಜೆ ಮಂಜುನಾಥ, ತುಮಕೂರು ೯೪೮೦೦೩೦೧೧೦
ವಾಸ್ತುಗಿಡ ತೆಗೆದುಕೊಂಡ ಹೋಗಿ ೨ ವರ್ಷವಾಯಿತು. ಗೃಹ ಪ್ರವೇಶವಾಯಿತು. ಮಕ್ಕಳಿಗೆ ವಿದ್ಯಾಭ್ಯಾಸವಾಗಿ ಮನಸ್ಸಿಗೆ ನೆಮ್ಮದಿಯಾಗಿದೆ. ದೇವರ ಅನುಗ್ರಹದಿಂದ ಎಲ್ಲಾ ಕೆಲಸಗಳು ಒಳ್ಳೆಯದಾಗಿದೆ. ಮನೆಯಲ್ಲಿ ಗಿಡದಿಂದಾಗಿ ನೆಮ್ಮದಿಯಿದೆ. ಧರ್ನಪ್ಪ ಗೌಡ ,ಬೆಳ್ತಂಗಡಿ ೯೦೦೮೬೧೫೫೨೯
ತಾವು ಕೊಟ್ಟ ವಾಸ್ತುಗಿಡದಿಂದ ಸೌತಡ್ಕ ಮಹಾಗಣಪತಿಯನ್ನು ನೆನೆದು ತಮ್ಮನಿಗೆ ಒಳ್ಳೆಯ ಸಂಬಂಧ ಬಂದು ಮದುವೆಯಾಗಬೇಕು ಎಂದು ಬಯಸಿದೆನು. ಆ ಪ್ರಾರ್ಥನೆ ಈಡೇರಿತ್ತು. ಹಾಗೆ ಕಾಣಿಕೆ ರೂಪದಲ್ಲಿ ಹಣ ಐವತ್ತು (೫೦) ರೂ.ವನ್ನು ಶ್ರೀ ರಾಜಗೋಪಾಲ ಭಟ್ಟರ ಮುಖಾಂತರ ಸೌತಡ್ಕ ಮಹಾಗಣಪತಿಯ ಸನ್ನಿಧಿಗೆ ಸಲ್ಲಿಸುತ್ತಿದ್ದೇವೆ. ಮನೆಯಲ್ಲಿ ಸುಖಃ ಶಾಂತಿ ಲಭಿಸಿದೆ. ಆರ್ಥಿಕ ಸಮಸ್ಯೆಯು ಕಡಿಮೆಯಾಗಿದೆ. ಸಂಬಳವು ಜಾಸ್ತಿಯಾಗಿದೆ. ಸೌತಡ್ಕ ಮಹಾಗಣಪತಿಯು ಸದಾ ಅನುಗ್ರಹ ಮಾಡಲು ಜೀವನ ಸಾರ್ಥಕವಾಗಲಿ ಬಿ. ಪ್ರವೀಣ ರೈ, ಸುಳ್ಯ ೯೪೪೯೭೨೩೧೩೩