Shree Kailar Rajgopal Bhat
Vaasthugida Sannidhi
Uppinangadi
Puttur T.Q
D.K Dist 574241
Karnataka
9448041693
9986221860
ವಾಸ್ತು ಗಿಡದ ಬಗೆಗೆ ಒಂದಿಷ್ಟು
ಜೀವನದಲ್ಲಿ ನಂಬಿಕೆ ಅತೀ ಅಗತ್ಯ. ಅದರ ಮೇಲೆಯೇ ಜೀವನದ ಪಂಚಾಂಗ ಭದ್ರವಾಗಿರುವುದು. ನಂಬಿಕೆ ಒಂದಿದ್ದರೆ ಬದುಕಿನಲ್ಲಿ ಯಶಸ್ಸು ಗಳಿಸುತ್ತಾ ಏನನ್ನಾದರೂ
ಸಾಧಿಸಬಹುದೆನ್ನುವುದವುದಕ್ಕೆ ಪ್ರಬಲ ಸಾಕ್ಷಿಯಾಗಿ ನಿಲ್ಲುತ್ತದೆ ಈ ವಾಸ್ತು ಗಿಡ. ವಾಸ್ತು ಗಿಡ ಮನೆಯಲ್ಲಿದ್ದರೆ ಸರ್ವವೂ ಶುಭಪ್ರದವಾಗುತ್ತದೆ. ಮನಸ್ಸಿನಾಳದಲ್ಲಿ ಏನೇನು ಇಚ್ಛೆಗಳಿರುತ್ತದೋ ಅದೆಲ್ಲವೂ ಕೇವಲ ಗಿಡವೊಂದರಿಂದ ಸಾಧಿತವಾಗುತ್ತದೆ ಎಂದರೆ ನಂಬಲು ಸಾಧ್ಯವಾಗದಿದ್ದರೂ ನಂಬಲೇ ಬೇಕಾದ ಹಲವಾರು ಜೀವಂತ ಉದಾಹರಣೆಗಳು ಕಂಡು ಬರುತ್ತದೆ.
ಏನಿದು ವಾಸ್ತು ಗಿಡ?
ಪೆಂಗ್‌ಶುಯಿ ಗಿಡಕ್ಕಿಂತ ಈ ವಾಸ್ತು ಗಿಡ ಭಿನ್ನವಾಗಿದ್ದು, ಈ ಗಿಡವನ್ನು ಚೀನಾದಲ್ಲಿ ಹೆಚ್ಚಿನವರು ತಮ್ಮ ಮನೆಯಲ್ಲಿಟ್ಟು ಶುಭ ಫಲಗಳನ್ನು ಪಡೆಯುತ್ತಿದ್ದಾರೆ. ಅಲ್ಲಿ ಈ ಗಿಡವನ್ನು ಆಗ್ನೇಯ ದಿಕ್ಕಿನಲ್ಲಿಟ್ಟರೆ ಇಲ್ಲಿ ಮಾತ್ರ ಈಶಾನ್ಯ ದಿಕ್ಕಿನಲ್ಲಿ ಇಡಬೇಕಾಗುತ್ತದೆ. ನೆಲದಿಂದ ಐದು ಅಡಿ ಎತ್ತರದಲ್ಲಿ ಹೆಚ್ಚು ಕಡಿಮೆ ಮೂಗಿನ ನೇರಕ್ಕೆ ಈಶಾನ್ಯ ದಿಕ್ಕಿನಲ್ಲಿ ಇಡಬೇಕು .
ಈಶಾನ್ಯ ಮೂಲೆಯಲ್ಲಿ ದೇವಸಾನ್ನಿಧ್ಯ ಇರುವುದರಿಂದ ಅದನ್ನು ಅಲ್ಲೇ ಇರಿಸಿ ಪ್ರತೀ ದಿನ ನೀರು ಹಾಕಬೇಕಾಗುತ್ತದೆ. ಪ್ರತೀ ದಿವಸ ಬೆಳಿಗ್ಗೆ ಗಿಡದ ಮುಂದೆ ನಿಂತು ಕನಿಷ್ಟ ೫ ನಿಮಿಷ ಧ್ಯಾನ ಮಾಡಬೇಕು.ತಿಂಗಳಿಗೊಮ್ಮೆ ಗಿಡವನ್ನು ಶುದ್ಧ ನೀರಿನಿಂದ ಸ್ವಚ್ಛಗೊಳಿಸಬೇಕು. ಬೌಲ್ ನಲ್ಲಿ ಹಾಕಿದ ಗಿಡ ಸತ್ತರೆ ಆ ಗಿಡವನ್ನು ಬೌಲ್ ನಿಂದ ತೆಗೆಯಬೇಕು. ಸುತ್ತಲಿರುವ ಕೆಂಪು ಪಟ್ಟಿಯನ್ನು ತೆಗೆಯಬಾರದು. ಟಿ.ವಿ ಮೇಲೆ ಅಥವಾ ಶೋಕೇಸ್ ಮೇಲೆ ಸುಮ್ಮನೆ ಇಡಬಾರದು. ಅಲ್ಲದೆ ಗಿಡ ಅಲುಗಾಡಬಾರದೆಂಬ ಕಾರಣಕ್ಕೆ ಗಿಡದ ಸುತ್ತ ಕಲ್ಲುಗಳನ್ನು ಇಡಬೇಕು.
ಒಂದೊಮ್ಮೆ ಗಾಜಿನ ಬೌಲ್ ಬಿದ್ದು ಒಡೆದು ಹೋದರೆ ಪಾರದರ್ಶಕ ಪಾತ್ರೆ ಹೊರತು ಪಡಿಸಿ ಬೇರೆ ಯಾವುದೇ ಪಾತ್ರೆ ಬಳಸಬಾರದು.
ಒಂದೊಮ್ಮೆ ಹಲವಾರು ದಿವಸ ಮನೆಬಿಟ್ಟು ಹೋಗುವ ಪ್ರಸಂಗ ಬಂದರೆ ದೊಡ್ಡ ಪಿಂಗಾಣಿ ಬೌಲ್ ನಲ್ಲಿ ಗಿಡವಿಟ್ಟು ತುಂಬಾ ನೀರು ಹಾಕಬೇಕು.
ಗಿಡದ ಬಾಳಿಕೆ ೧೦ ರಿಂದ ೧೫ ವರ್ಷ. ಯಾವುದೇ ಕಾರಣಕ್ಕೂ ಗಿಡಕ್ಕೆ ಮಣ್ಣು ಮರಳು ಹಾಕಬಾರದು. ಕತ್ತರಿಯಲ್ಲಿ ಗಿಡವನ್ನು ಕತ್ತರಿಸವುದು ಇತ್ಯಾದಿ ನಿಷಿದ್ಧ.